ಮುಖಪುಟ >>ಮಧ್ಯವರ್ತನೆ_ಅನುದಾನಗಳು

ಸಂಕ್ಷಿಪ್ತ ಪರಿಚಯ


ಅನುದಾನಗಳು

ಇಲಾಖಾ ವತಿಯಿಂದ ನಡೆಸುತ್ತಿರುವ ಸರ್ಕಾರಿ ಹಾಗೂ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಸರ್ವ ಶಿಕ್ಷಣ ಅಭಿಯಾನದಿಂದ ವಾರ್ಷಿಕವಾಗಿ ಶಾಲಾ ಅನುದಾನ, ಶಿಕ್ಷಕರ ಅನುದಾನ, ನಿರ್ವಹಣಾ ಅನುದಾನ ಹಾಗೂ ಕಲಿಕಾ ಬೋಧನೋಪಕರಣಗಳ ಅನುದಾನವನ್ನು ಶಾಲೆಗಳಿಗೆ ನೀಡಲಾಗುತ್ತಿದೆ.

ಕಲಿಕಾ ಬೋಧನೋಪಕರಣಗಳು (ಟಿ.ಎಲ್.ಇ) ಅನುದಾನ :

ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ, ಉತ್ತೇಜನ ಮತ್ತು ಕ್ರಿಯಾಶೀಲತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕಲಿಕಾ ಬೋಧನಾ ಉಪಕರಣಗಳನ್ನು ಖರೀದಿಸಲು ಮತ್ತು ಬಳಸಲು ಸರ್ವ ಶಿಕ್ಷಣ ಅಭಿಯಾನ ವತಿಯಿಂದ ಅನುದಾನವನ್ನು ಪ್ರತಿ ಹೊಸ ಪ್ರಾಥಮಿಕ ಶಾಲೆಗಳಿಗೆ ರೂ. 20,000/-, 6ನೇ ಉನ್ನತೀಕರಿಸಿದ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 50,000/- ಹಾಗೂ 8ನೇ ತರಗತಿಗೆ ಉನ್ನತೀಕರಿಸಿದ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 15,000/- ರಂತೆ ನೀಡಲಾಗುವುದು. 2013-14ನೇ ಸಾಲಿನಲ್ಲಿ ಯಾವುದೇ ಹೊಸ ಶಾಲೆಗಳು, ಶಾಲೆಗಳ ಉನ್ನತೀಕರಣ ಮಂಜೂರಾಗಿರುವುದಿಲ್ಲ.

ಶಾಲಾ ಅನುದಾನ :

ಈ ಅನುದಾನವನ್ನು ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಡೆಸುತ್ತಿರುವ ಶಾಲೆಗಳಿಗೆ ನೀಡಲಾಗುತ್ತದೆ.

  • 1 ರಿಂದ 5ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ರೂ. 5,000/- ನೀಡಲಾಗುತ್ತಿದೆ.
  • 6 ರಿಂದ 7/8ನೇ ತರಗತಿ ಹೊಂದಿರುವ ಪ್ರಾಥಮಿಕ ಶಾಲೆಗಳನ್ನು ಒಂದು ಘಟಕ ಎಂದು ಪರಿಗಣಿಸಿ ರೂ. 7,000/- ನೀಡಲಾಗುತ್ತಿದೆ.
  • ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ತರಗತಿಯನ್ನು ಹೊಂದಿರುವ ಶಾಲೆಗಳನ್ನು ಎರಡು ಘಟಕಗಳು ಎಂದು ಪರಿಗಣಿಸಿ ರೂ. 12,000/- ನೀಡಲಾಗುತ್ತಿದೆ.

ಶಾಲಾ ಅನುದಾನವನ್ನು ಕೆಳಗೆ ನಮೂದಿಸಿರುವ ಚಟುವಟಿಕೆಗಳಿಗೆ ಬಳಸಲಾಗುವುದು :

  • ಶಾಲೆಗಳಲ್ಲಿನ ದಾಖಲೆ ಪುಸ್ತಕಗಳನ್ನು ನಿರ್ವಹಣೆ ಮತ್ತು ಶಾಲಾ ಸಾದಿಲ್ವಾರು ಖರೀದಿಗಾಗಿ.
  • ಪ್ರತಿ ಶಾಲೆಯಲ್ಲಿಯ ಶಾಲಭಿವೃದ್ದಿ ಯೋಜನೆ ಸಿದ್ಧಪಡಿಸಲು ಮತ್ತು ಅನುಷ್ಠಾನಗೊಳಿಸಲು
  • ತರಗತಿಯಲ್ಲಿ ಪಾಠಬೋಧನಾ ಸಂದರ್ಭದಲ್ಲಿ ಬೋಧನೋಪಕರಣಗಳ ಅವಶ್ಯಕತೆಯಿದ್ದಲ್ಲಿ ಈ ಅನುದಾನವನ್ನು ಬಳಸಬಹುದು.
  • ಶಾಲಾ ಅನುದಾನ ಮತ್ತು ನಿರ್ವಹಣಾ ಅನುದಾನದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಮೇಲ್ಕಂಡ ಚಟುವಟಿಕೆಗಳ ನಂತರ ಉಳಿಯುವ ಹಣದಲ್ಲಿ ಶಾಲೆಗೆ ದೂರದರ್ಶನ ಮತ್ತು Receive only terminal (ROT)ಖರೀದಿಸಲು ಬಳಸಬಹುದು.

ನಿರ್ವಹಣಾ ಅನುದಾನ :

ಈ ಅನುದಾನವನ್ನು ಕೇವಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಳ್ಲಿ (ಸ್ವಂತ ಕಟ್ಟಡ ಹಾಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗಳಿಗೆ) ಕೊಠಡಿಗಳ ಸಂಖ್ಯೆಗಳ ಆಧಾರದ ಮೇಲೆ ಕೆಳಗಿನಂತೆ ನೀಡಲಾಗುವುದು:

ಕ್ರ ಸಂ

ಶಾಲೆಯ ವಿಧ

ಕೊಠಡಿಗಳ ಸಂಖ್ಯೆ

ನಿರ್ವಹಣಾ ಅನುದಾನ

1

2

3

4

1

ಕಿರಿಯ ಪ್ರಥಮಿಕ ಶಾಲೆ (1 ರಿಂದ 5ನೇ ತರಗತಿ)

3ನೇ ತರಗತಿಯವರೆಗೆ

5000

2

4ನೇ ತರಗತಿ

7500

3

5ನೇ ತರಗತಿ ಹಾಗೂ ಅನಂತರ

10000

4

 ಹಿರಿಯ ಪ್ರಾಥಮಿಕ ಶಾಲೆಗಳು (5 ರಿಂದ 7/8ನೇ ತರಗತಿಯವರೆಗೆ)

 3ನೇ ತರಗತಿಯವರೆಗೆ

5000

5

4ನೇ ತರಗತಿ

7500

6

5ನೇ ತರಗತಿ ಹಾಗೂ ಅನಂತರ

10000

7

ಕಿರಿಯ ಪ್ರಾಥಮಿಕ ಶಾಲೆಯ ಜೊತೆಗೆ ಹಿರಿಯ ಪ್ರಾಥಮಿಕ ಶಾಲೆಗಳು (1-7/8)

 3ನೇ ತರಗತಿಯವರೆಗೆ

5000

8

 4ನೇ ತರಗತಿ

7500

9

5ನೇ ತರಗತಿ ಹಾಗೂ ಅನಂತರ

10000

10

 6 ಮತ್ತು 7ನೇ ತರಗತಿ

15000

11

8ನೇ ತರಗತಿ ಹಾಗೂ ಅನಂತರ

20000

ನಿರ್ವಹಣಾ ಅನುದಾನವನ್ನು ಕೆಳಗೆ ನಮೂದಿಸಿರುವ ಚಟುವಟಿಕೆಗಳಿಗೆ ಬಳಸಲಾಗುವುದು :

  • ಶಾಲಾ ಕಟ್ಟಡದ ರಕ್ಷಣೆ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಅಗತ್ಯವಾದ ಚಟುವಟಿಕೆಗಳಾದ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವುದು, ಸಣ್ಣ ಪುಟ್ಟ ಕಟ್ಟಡ ದುರಸ್ಥಿ, ಪೀಠೋಪಕರಣಗಳ ದುರಸ್ಥಿ, ಪಾಠೋಪಕರಣಗಳ ದುರಸ್ಥಿ, ಕ್ರೀಡಾ ಸಾಮಗ್ರಿಗಳ ದುರಸ್ಥಿ, ವಿದ್ಯುಚ್ಛಕ್ತಿ ಬಿಲ್ ಪಾವತಿ, ದೂರವಾಣಿ ಬಿಲ್ ಪಾವತಿ, ಕುಡಿಯುವ ನೀರಿನ ವ್ಯವಸ್ಥೆ/ನಿರ್ವಹಣೆ ಮತ್ತು ಶೌಚಾಲಯಗಳ ನಿರ್ವಹಣೆಗಾಗಿ ಬಳಸಬಹುದಾಗಿದೆ.
  • ಉಳಿಕೆಯಾಗುವ ಅನುದಾನದಿಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇನ್ಸಿನಿರೇಟರ್ಸ್ (Incinerators) ಹಾಗೂ ಹೆಣ್ಣು ಮಕ್ಕಳಿಗಾಗಿ ಋತುಸ್ರಾವದ ಸಮಯದಲ್ಲಿ ಉಪಯೋಗಿಸಲ್ಪಡುವ ನ್ಯಾಪ್ ಕಿನ್ಸ್ಗಳನ್ನು ಖರೀದಿಸಲು ಬಳಸಿಕೊಳ್ಳಬಹುದಾಗಿದೆ

2013-14ನೇ ಸಾಲಿನಲ್ಲಿ ಶಾಲಾ ಅನುದಾನ ಹಾಗೂ ನಿರ್ವಹಣಾ ಅನುದಾನವನ್ನು ರಾಜ್ಯ ಕಛೇರಿಯಿಂದ ಶಾಲೆಗಳ ಎಸ್.ಡಿ.ಎಂ.ಸಿ ಖಾತೆಗೆ ಇ.ಸಿ.ಎಸ್ (Electronic Clearing System) ಮೂಲಕ ನೇರವಾಗಿ ಜಮಾ ಮಾಡಲಾಗಿದೆ.

ಶಿಕ್ಷಕರ ಅನುದಾನ :

2012-13ನೇ ಸಾಲಿನವರೆಗೆ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಪ್ರತಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ. 500/- ರಂತೆ ಪಾಠಬೋಧನೋಪಕರಣಗಳನ್ನು ಸಿದ್ಧಪಡಿಸಲು ನೀಡಲಾಗುತ್ತಿದ್ದು, 2013-14ನೇ ಸಾಲಿಗೆ ವಾರ್ಷಿಕ ಯೋಜನಾ ಅನುಮೋದನಾ ಮಂಡಳಿ ಸಭೆಯಲ್ಲಿ ಈ ಅನುದಾನವು ಮಂಜೂರಾಗಿರುವುದಿಲ್ಲ. 

 

 

 

 

 

Designed & Developed by eGovernance Unit,Department Of Public Instuction Bengaluru