ಮುಖ ಪುಟ>> ಮಧ್ಯವರ್ತನೆ _ಶಿಕ್ಷಕರ ತರಬೇತಿ

ಸಂಕ್ಷಿಪ್ತ ಪರಿಚಯ

ಶಿಕ್ಷಕರಿಗಾಗಿ ಸೇವಾ ಕಾಲೀನ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು :

ಸರ್ವ ಶಿಕ್ಷಣ ಅಭಿಯಾನವು 6-14 ವಯೋಮಾನದ ಗುಂಪಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಮುಂಚೂಣಿ  ಕಾರ್ಯಕ್ರಮವಾಗಿದೆ. ಸಾರ್ವತ್ರಿಕ ಪ್ರವೇಶ ಅವಕಾಶ ಮತ್ತು ಉಳಿಸಿಕೊಳ್ಳುವಿಕೆ ಗುರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಧಿಸಲಾಗಿದೆ. ಗುಣಾತ್ಮಕ ಶಿಕ್ಷಣವನ್ನು ಒದಗಿಸಲು ಎಸ್.ಎಸ್.ಎ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಸಂಬಂಧದಲ್ಲಿ ಕರ್ನಾಟಕದ ಸಾಧನೆಗಳನ್ನು  ರಾಷ್ಟ್ರಮಟ್ಟದಲ್ಲಿ ಪ್ರಶಂಸಿಸಲಾಗಿದೆ.
ಸರ್ವ ಶಿಕ್ಷಣ ಅಭಿಯಾನ ಪ್ರೇರಿತ ಉಪಕ್ರಮಗಳಿಗೆ ಸಂಬಂಧಿಸಿದಂತೆ ಶಿಕ್ಷಕ ತರಬೇತಿ ಪ್ರಕ್ರಿಯೆಯನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಶಿಖರ ಸಂಸ್ಥೆಯಾದ ಡಿ.ಎಸ್.ಇ.ಆರ್.ಟಿ. ಯು ನಡೆಸುತ್ತದೆ. ಡಿ.ಎಸ್.ಇ.ಆರ್.ಟಿ ಯು ರಾಜ್ಯದ ಉದ್ದಗಲದಲ್ಲಿ ಹರಡಿರುವ 30 ಡಯಟ್ ಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಮುಖ್ಯವಾಗಿ ಸೇವಾನಿರತ ಶಿಕ್ಷಕರ ತರಬೇತಿಗಾಗಿ ತರಬೇತಿ ಯೋಜನೆ, ಸಿದ್ಧತೆ, ಅನುಷ್ಟಾನ ಮತ್ತು ಮೌಲ್ಯಮಾಪನವನ್ನು ನಿರ್ದೇಶನಾಲಯವು ನಿರ್ವಹಿಸುತ್ತದೆ. ಅಲ್ಲದೇ ಅನುಶೀಲನ ಮತ್ತು ವರದಿ ಮಾಡುವ ಕೆಲಸವನ್ನು ಸಹ ನಿರ್ದೇಶನಾಲಯವೇ ನಿರ್ವಹಿಸುತ್ತದೆ.

 

Designed & Developed by eGovernance Unit,Department Of Public Instuction Bengaluru