ಸಂಕ್ಷಿಪ್ತ ಪರಿಚಯ
ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸೆಪ್ಟೆಂಬರ್ 2004ರಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯು ಸ್ಥಾಪನೆಯಾಯಿತು. ಈ ಸಮಿತಿಯು ಸೆಪ್ಟೆಂಬರ್ 2005ರ ವರದಿಯಲ್ಲಿ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ಪ್ರೌಢಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಶಿಫಾರಸ್ಸು ಮಾಡಿತ್ತು.
ದಿನಾಂಕ:13-09-2007ರಂದು ನಡೆದ ಯೋಜನಾ ಆಯೋಗದ ಸಭೆಯು ಮಾದರಿ ಶಾಲೆಗಳ ಪರಿಕಲ್ಪನೆಯನ್ನು ವ್ಯಕ್ತಪಡಿಸಿತು. ಕೇಂದ್ರೀಯ ವಿದ್ಯಾಲಯಗಳಲ್ಲಿರುವ ಗುಣಮಟ್ಟಕ್ಕೆ ಅನುಗುಣವಾದ ಮೂಲಸೌಕರ್ಯ ಹಾಗೂ ಸೌಲಭ್ಯಗಳು ಇರಬೇಕಾಗಿರುತ್ತದೆ. ಶಿಕ್ಷಕ-ಮಕ್ಕಳ ಅನುಪಾತ, ಐಸಿಟಿ ಬಳಕೆ, ಸಮಗ್ರ ಶೈಕ್ಷಣಿಕ ವಾತಾವರಣ, ಸೂಕ್ತ ಪಠ್ಯಕ್ರಮ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಷರತ್ತಿಗೆ ಒಳಪಟ್ಟಿರುತ್ತದೆ. ಇಂತಹ ಪ್ರತಿಯೊಂದು ಶಾಲೆಯು ಆ ಪ್ರದೇಶದ ಎಲ್ಲಾ ಶಾಲೆಗಳಲ್ಲಿ ಶ್ರೇಷ್ಟತೆಯ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.
ಗುರಿ ಮತ್ತು ಉದ್ದೇಶ
ದೃಷ್ಟಿ:
ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡುವುದರೊಂದಿಗೆ ಅವರು ಸರಿಯಾದ ಆಯ್ಕೆ ಮಾಡಿ ಉನ್ನತ ಶೈಕ್ಷಣಿಕ ಮತ್ತು ವೈಯಕ್ತಿಕ ಶ್ರೇಷ್ಟತೆಯನ್ನು ಸಾಧಿಸುವಂತೆ ಮಾಡುವುದು ಮಾದರಿ ಶಾಲೆಗಳ ದೃಷ್ಟಿಯಾಗಿದೆ
ಗುರಿ:
ಶೈಕ್ಷಣಿಕವಾಗಿ ಹಿಂದುಳಿದಿರುವ 6000 ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾಗಿ ಶ್ರೇಷ್ಟತೆಯ ಮಾನದಂಡವನ್ನು ಸಾಧಿಸಿರುವ ಮಾದರಿ ಶಾಲೆಯಲ್ಲಿ ಪ್ರಾರಂಭಿಸಿ ಪ್ರತಿಭಾವಂತ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ.
ಉದ್ಧೇಶ :
- ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಟ ಒಂದು ಅತ್ಯುತ್ತಮ ಗುಣಮಟ್ಟವುಳ್ಳ ಹಿರಿಯ ಪ್ರೌಢಶಾಲೆಯನ್ನು ಹೊಂದುವುದು.
- ಶೈಕ್ಷಣಿಕವಾಗಿ ಮುನ್ನಡೆಸುವ ಪಾತ್ರ ವಹಿಸುವುದು.
- ನವೀನ ಪಠ್ಯಕ್ರಮ ಹಾಗೂ ಶಿಕ್ಷಣ ಕಲೆಗಳನ್ನು ಅನುಷ್ಟಾನಗೊಳಿಸುವುದು.
- ಮೂಲ ಸೌಕರ್ಯ, ಪಠ್ಯಕ್ರಮ, ಮೌಲ್ಯಮಾಪನ ಮತ್ತು ಶಾಲೆಯ ಆಡಳಿತಗಳಲ್ಲಿ ಮಾದರಿಯಾಗಿರುವುದು.
ಆಯವ್ಯಯ
2012-13ನೇ ಸಾಲಿಗೆ ಅಂಗೀಕಾರಗೊಂಡ ಮಾದರಿ ಶಾಲೆಗಳ ಆಯವ್ಯಯ.
2011-12ನೇ ಸಾಲಿಗೆ ಮಾದರಿ ಶಾಲೆಗಳಿಗೆ ಅವಶ್ಯಕವಿರುವ ಆಯವ್ಯಯದ ವಿವರ.