ಸಿವಿಲ್ ಕಾಮಗಾರಿಗಳು
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ-ಕರ್ನಾಟಕವು ನೊಂದಾಯಿತ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್.ಎಂ.ಎಸ್.ಎ)ಯ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಧ್ಯಮಿಕ ಶಿಕ್ಷಣದ ಸಾರ್ವತ್ರೀಕರಣದ ಗುರಿಗಳನ್ನು ಸಾಧಿಸುವ ಉದ್ಧೇಶದ ಈ ಕಾರ್ಯಕ್ರಮಕ್ಕೆ 75:25 ಅನುಪಾತದಲ್ಲಿ ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವೆ ಹಣಕಾಸು ನಿಧಿಯನ್ನು ಹಂಚಿಕೆ ಮಾಡಲಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ, ಸಿವಿಲ್ ಕಾಮಗಾರಿಗಳ ಅನುಷ್ಟಾನವನ್ನು ಕೆಳಗಿನ 4 ಗುಂಪುಗಳಲ್ಲಿ ವಿವರಿಸಿದೆ :
- ಸರ್ಕಾರಿ ಪ್ರೌಢಶಾಲೆಗಳಿಗೆ ನೂತನ ಶಾಲಾ ಕೊಠಡಿಗಳ ನಿರ್ಮಾಣ(ಉನ್ನತೀಕರಣಕ್ಕಾಗಿ)
- ಹಾಲಿ ಇರುವ ಪ್ರೌಢಶಾಲೆಗಳ ಬಲವರ್ಧನೆಗಾಗಿ ಕಟ್ಟಡಗಳ ನಿರ್ಮಾಣ
- ಕೆ.ವಿ. ಮಾದರಿಯ/ಆದರ್ಶ ವಿದ್ಯಾಲಯ ಎಂಬ ಹೆಸರಿನಲ್ಲಿ ಮಾದರಿ ಶಾಲಾ ಸಮುಚ್ಛಯಗಳ ನಿರ್ಮಾಣ
- ಸರ್ಕಾರಿ ಪ್ರೌಢಶಾಲೆಗಳ ಬಾಲಕಿಯರಿಗಾಗಿ ವಸತಿ ನಿಲಯಗಳು/ಕೆ.ಜಿ.ಬಿ.ವಿ. ಕಟ್ಟಡಗಳ ನಿರ್ಮಾಣ