ಮುಖಪುಟ >> ಮಧ್ಯವರ್ತನೆಗಳು >> ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ

ಸಂಕ್ಷಿಪ್ತ ಪರಿಚಯ

ಮುನ್ನುಡಿ :

ಕೇಂದ್ರ ಪುರಸ್ಕೃತ ಯೋಜನೆಯಡಿ ರಾಷ್ಟ್ರದ 3479 ಶೈಕ್ಷಣಿಕವಾಗಿ ಹಿಂದುಳಿದ ತಾಲ್ಲೂಕುಗಳಲ್ಲಿ 9 ಮತ್ತು 10 ನೇ ತರಗತಿ ಹೆಣ್ಣು ಮಕ್ಕಳಿಗಾಗಿ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು 2008-09 ರಲ್ಲಿ ಯೋಜಿಸಿ 2009-10 ರಲ್ಲಿ ಅನುಮೋದನೆ ನೀಡಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ 62 ತಾಲ್ಲೂಕುಗಳಿಗೆ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳು 2009-10 ರಲ್ಲಿ ಮಂಜೂರಾಗಿದ್ದು, 2010-11 ರಿಂದ ಪ್ರಾರಂಭವಾಗಿರುತ್ತದೆ.

ಕಸ್ತೂರಿಬಾ ಬಾಲಿಕಾ ವಿದ್ಯಾಲಯದಲ್ಲಿ 8ನೇ ತರಗತಿ ಪೂರ್ಣಗೊಳಿಸುವ ಹೆಣ್ಣು ಮಕ್ಕಳು ಪ್ರೌಢಶಿಕ್ಷಣವನ್ನು ಪಡೆಯುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ಧೇಶವಾಗಿದ್ದು, 9 ರಿಂದ 10ನೇ ತರಗತಿವರೆಗಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗ, ಓ.ಬಿ.ಸಿ. ಮೈನಾರಿಟಿ ಸಮುದಾಯ ಮತ್ತು ಬಿ.ಪಿ.ಎಲ್. ಕುಟುಂಬಗಳ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆ ತೊರೆಯದೆ ಪ್ರೌಢಶಿಕ್ಷಣದ ಹಂತದವರೆಗೆ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಕೆ.ಜಿ.ಬಿ.ವಿ. ಶಾಲೆಗಳಲ್ಲಿ 8ನೇ ತರಗತಿ ಪೂರೈಸುವ ವಿದ್ಯಾರ್ಥಿನಿಯರಿಗೆ ಪ್ರಥಮ ಆದ್ಯತೆ ನೀಡಲಾಗಿದೆ. 2016-17ನೇ ಸಾಲಿಗೆ 3825 ವಿದ್ಯಾರ್ಥಿನಿಯರು ಫಲಾನುಭವಿಗಳಾಗಿರುತ್ತಾರೆ.


ನಿಗದಿತ ಗುರಿ :

The girl students in the age group of 14-18 yrs. studying in classes IX and XII belonging to SC, ST, OBC, Minority communities and BPL families will form the target group of the Scheme. Students passing out of KGBV will be given preference in admission in hostels. At least 50% of girls admitted will be from SC, ST, OBC and Minority communities.   

ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳ ರೂಪುರೇಷೆ.

ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳ ಪಟ್ಟಿ

ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳ ಪಟ್ಟಿ.

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್