ಸಂಕ್ಷಿಪ್ತ ಪರಿಚಯ
ಶಾಲೆಗಳಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕೆ ಉಂಟು ಮಾಡಲು ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ರೂ.50000/- ಶಾಲಾ ಅನುದಾನ ನೀಡಲಾಗುತ್ತಿದೆ. ಮುಖ್ಯ ಶಿಕ್ಷಕರು, ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಕರು ಸೇರಿ ಶಾಲಾ ಅನುದಾನ ಮಾರ್ಗಸೂಚಿಯನ್ವಯ ಶಾಲಾ ಪ್ರಯೋಗಾಲಯ, ಗ್ರಂಥಾಲಯ, ಶಾಲೆಯ ಪರಿಸರಗಳನ್ನು ಅಭಿವೃದ್ಧಿಪಡಿಸಲು, ಶಾಲಾಭಿವೃದ್ಧಿ ಯೋಜನೆ ಸಿದ್ಧಪಡಿಸಿಕೊಂಡು ಅನುದಾನವನ್ನು ಬಳಸಿ ಕೊಳ್ಳುತ್ತಾರೆ. ಕೆಲವು ಶಾಲೆಗಳು, ಲ್ಯಾಪ್ ಟಾಪ್ , ಡಾಟಾ ಕಾರ್ಡ್ ಗಳನ್ನು ಸಹ ಖರೀದಿಸಿದ್ದು, ತರಗತಿಗಳಲ್ಲಿ ಮಾಹಿತಿ ತಂತ್ರಜ್ಞಾನ ಬಳಸುತ್ತಿರುತ್ತಾರೆ.
ಈ ಸಂಬಂಧ ರಾಜ್ಯ ಕಛೇರಿಯಿಂದ ಶಾಲೆಯ ಮುಖ್ಯ ಶಿಕ್ಷಕರಿಗೆ ಎಸ್.ಡಿ.ಎಂ.ಸಿ. ಯನ್ನು ಬಳಸಿಕೊಂಡು ಶಾಲಾಭಿವೃದ್ಧಿ ಯೋಜನೆ ಸಿದ್ಧಪಡಿಸಿರುವ ಸಂಬಂಧ ದೂರಸಂಪರ್ಕ ತರಬೇತಿ ನೀಡಲಾಗಿದೆ. 2009-10 ರಿಂದ 2013-14 ರ ವರೆಗೆ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಶಾಲಾ ಅನುದಾನ ಬಿಡುಗಡೆ ಮಾಡಲಾಗಿದೆ. 2014-15 ರಲ್ಲಿ 4468 ಸರ್ಕಾರಿ ಪ್ರೌಢಶಾಲೆಗಳಿಗೆ ಮಂಜೂರಾಗಿದ್ದು, ಮೊದಲ ಬಾರಿಗೆ 517 ಸಮಾಜ ಕಲ್ಯಾಣ ಇಲಾಖೆ ಶಾಲೆಗಳಿಗೆ ಶಾಲಾ ಅನುದಾನ ಮಂಜೂರಾಗಿರುತ್ತದೆ. ಆದರ್ಶ ವಿದ್ಯಾಲಯಗಳು ಮತ್ತು ಶಾಲೆಗಳು ಸೇರಿ ಒಟ್ಟು 2016-17ನೇ ಸಾಲಿನಲ್ಲಿ ಒಟ್ಟು 5220 ಶಾಲೆಗಳಿಗೆ 260,00,000-00, 2017-18ರಲ್ಲಿ 5240 ಶಾಲೆಗಳಿಗೆ 262,00,000-00 ಮಂಜೂರು ಮಾಡಲಾಗಿದೆ.
ಯೋಜನೆ