Skip to content
ಮುಖಪುಟ >> ಮಧ್ಯವರ್ತನೆ >> ಹಾಲ ಇರುವ ಶಾಲೆಗಳ ಉನ್ನತೀಕರಣ

ಸಂಕ್ಷಿಪ್ತ ಪರಿಚಯ

ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣದ ನಂತರ ಪ್ರೌಢಶಾಲಾ ಶಿಕ್ಷಣ ಸಾರ್ವತ್ರೀಕರಣದ ಹಿನ್ನೆಲೆಯಲ್ಲಿ ಪ್ರೌಢಶಾಲಾ ಸೌಲಭ್ಯಗಳನ್ನು 5 ಕಿ.ಮೀ ವ್ಯಾಪ್ತಿಯಲ್ಲಿ ದೊರಕುವಂತೆ ಮಾಡುವ ಉದ್ಧೇಶವನ್ನು ಆರ್.ಎಂ.ಎಸ್.ಎ ಹೊಂದಿರುತ್ತದೆ. ಈ ಮೂಲಕ ಎಲ್ಲಾ ವಿದ್ಯಾರ್ಥಿಗಳು ಪ್ರೌಢಶಿಕ್ಷಣವನ್ನು ಪಡೆಯುವಂತೆ ಅಗತ್ಯ ಸೌಲಭ್ಯವನ್ನು ಒದಗಿಸುತ್ತದೆ.

ಶಾಲಾ ಸೌಲಭ್ಯಗಳ ಜೊತೆಗೆ ಶಾಲಾ ಕಟ್ಟಡ, ಶಿಕ್ಷಕರು ಮತ್ತು ಬೋಧನಾ ಸಾಮಗ್ರಿಗಳನ್ನು ಈ ಶಾಲೆಗಳಿಗೆ ಒದಗಿಸುವ ಮೂಲಕ ಪ್ರೌಢಶಿಕ್ಷಣ ಸಾರ್ವತ್ರೀಕರಣ ಸಾಧಿಸುವ ಕಾರ್ಯಕ್ರಮ ಆಗಿರುತ್ತದೆ. ಎಲ್ಲಾ ಜಿಲ್ಲೆಗಳು ಜಿಲ್ಲಾ ಅಗತ್ಯತೆಗಳನ್ನು ಗುರುತಿಸಿ ವಾರ್ಷಿಕ ಯೋಜನೆಗಳನ್ನು ಪ್ರತಿ ವರ್ಷ ಸಿದ್ದಪಡಿಸಿ ಪ್ರಸ್ತಾವನೆಯನ್ನು ಸಲ್ಲಿಸುತ್ತವೆ. ಜಿಲ್ಲಾ ಯೋಜನೆಗಳ ಕ್ರೋಢೀಕರಣವನ್ನು ರಾಜ್ಯ ಹಂತದಲ್ಲಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯಲಾಗುತ್ತದೆ.

ನಿಯಮಗಳು

ಆರ್.ಎಂ.ಎಸ್.ಎ ಅಡಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಲು ಅನುಸರಿಸಬೇಕಾದ ನಿಯಮಗಳು

  1. 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲಾ ಸೌಲಭ್ಯ ಇಲ್ಲದ ಹಾಗೂ 9ನೇ ತರಗತಿಗೆ 70 ಮಕ್ಕಳು ದಾಖಲಾಗುವಂತಹ ಶಾಲೆ ಆಗಿರಬೇಕು.
  2. 2 ವಿಭಾಗದ ಶಾಲೆಗಳಿಗೆ ಆದ್ಯತೆ, ಭೌತಿಕ ಸಮಸ್ಯೆಗಳಿರುವ (ಗುಡ್ಡಗಾಡು ಪ್ರದೇಶ, ನದಿ, ಕಾಲುವೆ ಮುಂತಾದ ಸಮಸ್ಯೆಗಳು) ಇದ್ದಲ್ಲಿ, 50 ಜನ ವಿದ್ಯಾರ್ಥಿಗಳಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಬಹುದು ಆದರೆ, 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರೌಢಶಾಲಾ ಸೌಲಭ್ಯ ಇರಬಾರದು. 1 ವಿಭಾಗದ ಶಾಲೆಗೆ 25-35 ವಿದ್ಯಾರ್ಥಿಗಳಿದ್ದರೂ ಮೇಲಿನ ಸನ್ನಿವೇಶದಲ್ಲಿ ಪ್ರಸ್ತಾವನೆ ಸಲ್ಲಿಸಬಹುದು. ಅಗತ್ಯ ನಿವೇಶನ ಇರಬೇಕು ನಿವೇಶನ ದಾಖಲೆ ಈ ಶಾಲೆಗಳಿಗೆ 1 ಮುಖ್ಯ ಶಿಕ್ಷಕರು ಹಾಗೂ 5 ವಿಷಯ ಶಿಕ್ಷಕರು ಇರಬೇಕು, ವಿಷಯ ಶಿಕ್ಷಕರ ಹುದ್ದೆಗಳನ್ನು ನೀಡಲಾಗುವುದು.(1 ಪ್ರ.ಭಾಷೆ, 1 ದ್ವಿ.ಭಾಷೆ, 1 ಗಣಿತ, 1 ವಿಜ್ಞಾನ, 1 ಸಮಾಜ)

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್